Celebrate-Teacher-Public-Kannada

ಟೀಚರ್ಸ್ ಆಚರಣೆ

“ಬುದ್ಧಿವಂತರು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಕ್ಕೂ ನಕ್ಷತ್ರಗಳಂತೆ ಹೊಳೆಯುವರು.” ದಾನಿಯೇಲ 12:3ಬಿ

ಅಂತರಾಷ್ಟ್ರೀಯ ಆನ್‌ಲೈನ್ ತರಬೇತಿ

ಟೀಚರ್ಸ್‌ ಆಚರಣೆಗೆ ಸ್ವಾಗತ

ಮಕ್ಕಳ ಸೇವಕರಾಗಿ, ನಾವು ತಂತ್ರಜ್ಞಾನದ ಸವಾಲುಗಳನ್ನು ಎದುರಿಸುತ್ತಾ ಇದ್ದೇವೆ, ಪ್ರತಿಯೊಂದು ವಾರ ಯಾವ ರೀತಿ ಪ್ರೋತ್ಸಾಹಗೊಳ್ಳಬೇಕು, ಮಕ್ಕಳ ಹಾಜರಾತಿಯನ್ನು ಕಾಯ್ದುಕೊಳ್ಳುವದು ಹೇಗೆ, ಮತ್ತು ಅನೇಕ ಸಂದೇಹಗಳು ಮತ್ತು ಹೋರಾಟಗಳು ಮನಸ್ಸಿಗೆ ಬರುತ್ತವೆ. ನಿಮಗೆ ಹೇಗೆ ಅನ್ನಿಸುತ್ತದೆ ಎಂದು ನಮಗೆ ಗೊತ್ತು, ಮತ್ತು ನಾವು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಕಾರಣದಿಂದಲೇ ತರಬೇತಿಯ ಈ ಕಾರ್ಯವನ್ನು ನಿಮಗಾಗಿ ಸಿದ್ಧಮಾಡಲು ದೇವರು ನಮ್ಮನ್ನು ಪ್ರೇರೇಪಿಸಿದ್ದಾನೆ, ಮಕ್ಕಳ ಸೇವೆಗೆ ದೊಡ್ಡ ಆಶೀರ್ವಾದವಾಗಿರುವಂಥ ಸಂಪನ್ಮೂಲಗಳನ್ನು ನಿಮಗೆ ಒದಗಿಸಲು ನಾವು ಬಯಸುತ್ತೇವೆ ಮತ್ತು ನೀವು ಒಂಟಿಗರಲ್ಲ ಎಂಬದನ್ನು ಅರಿತುಕೊಳ್ಳಲು ಸಹಾಯ ಮಾಡುವವರಾಗಿದ್ದೇವೆ. ನಿಮ್ಮಂತೆಯೇ, ಲೋಕದಾದ್ಯಂತ, ಉತ್ತಮವಾಗಿ ಮಕ್ಕಳ ಸೇವೆ ಮಾಡಲು ಪ್ರಯತ್ನಿಸುತ್ತಿರುವ ಮಕ್ಕಳ ಸೇವೆಯ ನಾಯಕರು, ಶಿಕ್ಷಕರು, ಸಭಾಪಾಲಕರು ಮತ್ತು ಸ್ವೇಚ್ಛಾಪರರು ಇದ್ದಾರೆ. ಒಟ್ಟಾಗಿ ಆಚರಿಸುವ ಸಲುವಾಗಿ ಮುಂದಿನ ವರ್ಷದ ಪ್ರಾರಂಭದಲ್ಲಿ ನಾವೆಲ್ಲರೂ ಯಾಕೆ ಒಟ್ಟಾಗಿ ಸೇರಬಾರದು? ನಮ್ಮ ವಿಜಯಗಳನ್ನು ಆಚರಿಸೋಣ ಮತ್ತು ನಮ್ಮ ಸೇವೆಗಳಿಗೆ ದೇವರು ಕೊಟ್ಟಿರುವ ಆಶೀರ್ವಾದಗಳನ್ನು ಒಪ್ಪಿಕೊಳ್ಳೋಣ. ಜನವರಿ ತಿಂಗಳಿನಲ್ಲಿ ಟೀಚರ್ಸ್ ಆಚರಣೆ ಮಾಡಲು ನಾವೆಲ್ಲರೂ ಒಟ್ಟಾಗಿ ಸಂತೋಷ ಸಮಾರಂಭಗಳಲ್ಲಿ ಎಸೆದಾಡುವ ಬಣ್ಣದ ಕಾಗದದ ಚೂರುಗಳ ಫಿರಂಗಿಗಳನ್ನು ಮಾಡೋಣ!

ತರಬೇತಿಯ ವಿಷಯದ ಕಡೆಗೆ ಒಂದು ನೋಟ

ಕಾರ್ಯಕ್ರಮದ ಕೈಪಿಡಿ

ಮುಖ್ಯ ಭಾಗಗಳಿಗೆ ನಿಮಗೆ ಮಾರ್ಗದರ್ಶಕ, ನಿಮ್ಮ ವಿದ್ಯಾರ್ಥಿಗಳೊಂದಿಗೆ ಆಚರಿಸಲು ಸಲಹೆಗಳಿರುವವು, ಹಾಗೆಯೇ ನಿಮ್ಮ ಶಿಕ್ಷಕರ ಅಥವಾ ನಾಯಕರ ಆಚರಣೆಗೆ ಸರಳವಾಗಿರುವ ಕೌಶಲದ ಆಲೋಚನೆಗಳು ಸಿಗುವವು. ನೀವು ಅದನ್ನು ಪ್ರಿಂಟ್ ಮಾಡಿಸಬಹುದು ಅಥವಾ ಡಿಜಿಟಲ್ ಆಗಿ ಉಪಯೋಗಿಸಬಹುದು.

ನಿಮ್ಮ ವಾಸ್ತವ ತರಗತಿಗಳ ಸಮಯದಲ್ಲಿ ಉಪಯೋಗಿಸಲು ನಿಮಗೆ ಆನ ಲೈನ್ ಆಟಗಳು ಬೇಕಿವೆ ಎಂಬದು ನಮಗೆ ಗೊತ್ತಿದೆ, ಆದರೆ ವ್ಯಕ್ತಿಗತವಾಗಿ ಉಪಯೋಗಿಸಲು ಬೋನಸ್ ಪಡೆಯುವದರ ಬಗೆಗಿನ ನಿಮ್ಮ ಅಭಿಪ್ರಾಯ ಏನು. ಜೆನ್ನಿಫರ್ ಸಾನ್ಚೆಜ್ ರವರು ಸಿದ್ಧಮಾಡಿರುವ ನಮ್ಮ ಆನ್ ಲೈನ್ ಆಟಗಳ ಹೊಸ ಆವೃತ್ತಿಯನ್ನು ಉಪಯೋಗಿಸಿರಿ.

ಮಕ್ಕಳ ಸೇವೆಯ ನಿಮ್ಮ ಆನ್ ಲೈನ್ ತರಗತಿಯನ್ನು ಅತ್ಯಂತ ಸ್ಪಷ್ಟವನ್ನಾಗಿಸಲು ನಿಮಗೆ ಸಹಾಯ ಮಾಡುವ ಸಲುವಾಗಿ ನಾವು 10 ಸಲಹೆಗಳನ್ನು ಸಿದ್ಧಮಾಡಿದ್ದೇವೆ. ಇವುಗಳನ್ನು ಅಭ್ಯಾಸ ಮಾಡುವ ಮೂಲಕ ನೀವು ಪ್ರಯೋಜನವನ್ನು ಹೊಂದಬಹುದು ಯಾಕಂದರೆ ತರಗತಿಯನ್ನು ಪ್ರಾರಂಭಿಸುವ ಮೊದಲು ನಾವು ಯೋಜನೆ ಮಾಡಿಕೊಳ್ಳಬೇಕೆಂದು ಬಯಸುವ ಕ್ಷೇತ್ರಗಳ ಬಗ್ಗೆ ಬಹಳ ನಿರ್ದಿಷ್ಟತೆಯನ್ನು ಹೊಂದಿವೆ.

ಸಮಾಧಾನ ಮತ್ತು ಸಂತೋಷವಿರುವ ಹಾಗೆ ನಿಮ್ಮ ತರಗತಿಯ ನಿರ್ವಹಣೆ ಮಾಡುವದು ಹೇಗೆ. ಕ್ರಮವನ್ನು ಪಾಲನೆ ಮಾಡಲು ಮತ್ತು ಆಶೀರ್ವಾದವಾಗಿರಲು ಯೋಜನೆಗಳನ್ನು ಅಳವಡಿಸಿಕೊಳ್ಳಲು ನಮಗೆ ಸಹಾಯವಾಗುವಂಥ ಅದ್ಭುತವಾದ ಕಾರ್ಯಗಾರವನ್ನು ಸಹೋದರಿ ವಿಕ್ಕಿ ಕಂಗಾಸ್ ನಮಗಾಗಿ ಬರೆದಿದ್ದಾರೆ.

ನಾವೆಲ್ಲರೂ ನಮ್ಮ ಸತ್ಯವೇದದ ಕಥೆಗಳನ್ನು ಹೆಚ್ಚು ಕ್ರಿಯಾತ್ಮಕತೆಯೊಂದಿಗೆ, ಮಕ್ಕಳಿಗೆ ಏನಾದರೂ ದೃಶ್ಯಗಳನ್ನು ತೋರಿಸುವ ಮೂಲಕ ಕೊಂಚ ಉತ್ತಮವನ್ನಾಗಿಸಲು ಬಯಸುತ್ತೇವೆ. ಆದರೆ ನಾವು ಕಲೆಗಾರರಲ್ಲದಿರಬಹುದು, ಆದ್ದರಿಂದಲೇ ನಾವು ಫೋಟೋಗಳು ಅಥವಾ ಪ್ರಿಂಟ್ ಆಗಿರುವ ಬಣ್ಣದ ಚಿತ್ರಗಳನ್ನು ಎದುರುನೋಡುವವರಾಗಿದ್ದೇವೆ. ಸ್ವಲ್ಪ ಸಹಾಯದಿಂದ ಸರಳವಾಗಿರುವಂಥವುಗಳನ್ನು ಬಿಡಿಸಲು ಸಾಧ್ಯವಾದರೆ ಹೇಗಿರುವದು? ಸುಸನ್ನ ಕಂಗಾಸ್ ಕೆಲವು ಸೂಪರ್ ಸುಲಭ ಚಿತ್ರಗಳನ್ನು ಬರೆಯಲು ನಿಮಗೆ ಸಹಾಯ ಮಾಡುತ್ತಾರೆ, ಮತ್ತು ನಿಮ್ಮ ತರಗತಿಗೆ ಹೆಚ್ಚು ಕ್ರಿಯಾತ್ಮಕತೆಯನ್ನು ಕೊಡುತ್ತಾರೆ.

ನಿಮ್ಮ ಮಕ್ಕಳಿಗೆ ಸತ್ಯವೇದ ವಚನಗಳ ಕಂಠಪಾಠ ಮಾಡುವದು ಇಷ್ಟವೇ? ಸತ್ಯವೇದದ ವಚನಗಳ ಕಂಠಪಾಠ ಮಾಡುವ ಮೂಲಕ ನಿಮ್ಮ ತರಗತಿಯನ್ನು ಹೆಚ್ಚು ಆಕರ್ಷಕ ಮತ್ತು ಸಂತೋಷಕರವನ್ನಾಗಿಸಲು ಕೆಲವು ಆಲೋಚನೆಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಮಕ್ಕಳ ಸೇವೆಯ ಮೂಲಕ ಸೇವೆಮಾಡಲು ಸಿದ್ಧರಾಗುವದನ್ನು ಮುಂದುವರೆಸಿರಿ

ಕಾರ್ಯಕ್ರಮಕ್ಕೆ ಸಂಪೂರ್ಣ ಪ್ರವೇಶವನ್ನು ಪಡೆಯಿರಿ. ಉಚಿತವಾಗಿ ನೊಂದಾಯಿಸಿಕೊಳ್ಳಿರಿ

ನೀವೇ “ನಿರೂಪಕರಾಗಿರಬಹುದು” ಮತ್ತು ನಿಮ್ಮ ಸಭೆಯಲ್ಲಿ ನಡೆಸಬಹುದು!

ವೇಳಾಪಟ್ಟಿ

ಈ ಕಾರ್ಯಕ್ರಮವನ್ನು ಬಹಳ ಗ್ರಾಹಕೀಯವಾಗಿರವ ಹಾಗೆ ರೂಪಿಸಲಾಗಿದೆ. ನಮ್ಮ ಅರ್ಧ-ದಿನ, ಪೂರ್ತಿ-ದಿನ, ಅಥವಾ ಎರದು ದಿನದ ವೇಳಾಪಟ್ಟಿಯಿಂದ ಆಯ್ಕೆಮಾಡಿಕೊಳ್ಳಿರಿ. ನೀವು ಸಣ್ಣ ಕಾಲಾವಧಿಗಳಾಗಿಯೂ ವಿಭಾಗಿಸಿಕೊಳ್ಳಬಹುದು. ನಾವು ನಿಜವಾಗಿಯೂ ಎರಡು ದಿನಗಳ ಶಿಕ್ಷಕರ ಕಾರ್ಯಕ್ರಮವನ್ನು ಶಿಫಾರಸ್ಸು ಮಾಡುವವರಾಗಿದ್ದೇವೆ. ಇದರಿಂದ ವಿಶ್ರಮಿಸಿಕೊಳ್ಳಲು ಹೆಚ್ಚು ಸಮಯ ದೊರೆಯುತ್ತದೆ, ಇತರೆ ಶಿಕ್ಷಕರನ್ನು ಭೇಟಿ ಮಾಡಬಹುದಾಗಿದೆ, ಮತ್ತು ಕಾರ್ಯಕ್ರಮದ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಆಗುತ್ತದೆ. 24 ತಾಸುಗಳ ಕಾಲ ಒಟ್ಟಾಗಿರುವದರಲ್ಲಿ ಅಮೋಘವಾದ ಪ್ರಭಾವವು ಏನೋ ಉಂಟಾಗುತ್ತದೆ. ನಿಮಗೆ ಎಷ್ಟು ಸಮಯವಿದೆ ಎಂಬದು ನಿಮಗೆ ಮೊದಲೇ ಗೊತ್ತಿರುತ್ತದೆ, ಆದ್ದರಿಂದ ನಿಮಗೆ ಮತ್ತು ನಿಮ್ಮ ಸಭೆಗೆ ಯಾವುದು ಉತ್ತಮವೋ ಅದನ್ನು ಆಯ್ಕೆ ಮಾಡಿಕೊಳ್ಳಿರಿ. ಸೂಚಿಸಲಾಗಿರುವ ಈ ಸಮಯಗಳು ಕೇವಲ ಸಲಹೆಗಳಾಗಿವೆ.

ದಿನ 1

ಸ್ವಾಗತ ವೀಡಿಯೋ

ಆಕ್ಷನ್ ಹಾಡುಗಳು: “ಕ್ನಾಕ್ ಔಟ್ ಮೈ ಸಿನ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಭಾಗ 1: ವಿಜಯಶಾಲಿ ಚಾಂಪಿಯನ್

ಚಟುವಟಿಕೆ: ಪೇಪರ್ ಬಹುಮಾನ. “ಪೇಪರ್ ನಿಂದ ಬಹುಮಾನ ಮಾಡುವದು ಹೇಗೆ”, ವೀಡಿಯೋ ನೋಡಿರಿ. ನಂತರ ತಂಡವಾಗಿ ಕೆಲವು ಬಹುಮಾನಗಳನ್ನು ಮಾಡಿರಿ. ನಮ್ಮೊಂದಿಗೆ ಹಂಚಿಕೊಳ್ಳಿರಿ: ವಾಟ್ಸಪ್ +52 55 1573 2969 ಇಂಗ್ಲೀಷ್

ವಿಷಯ ಓದಿರಿ: ಆನ್ ಲೈನ್ ಮಾಡುವ ಸಲುವಾಗಿ ಕಾರ್ಯಕ್ರಮವನ್ನು ಬದಲಾಯಿಸುವದು ಹೇಗೆ.

ನಾವು ತಿಳಿಸಿರುವ 5 ರಲ್ಲಿ ಯಾವುದಾದರು 1 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಊಟದ ಸಮಯದ

ಆಕ್ಷನ್ ಹಾಡುಗಳು: ವಿಮರ್ಶೆ “ಕ್ನಾಕ್ ಔಟ್ ಮೈ ಸಿನ್”

ನಾವು ತಿಳಿಸಿರುವ 5 ರಲ್ಲಿ ಯಾವುದಾದರು 2 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಚಟುವಟಿಕೆ: ಸೆಲ್ಫಿ ಸ್ಟಿಕ್ ಟ್ರೈಪಾಡ್ ಮಾಡಿರಿ. ವೀಡಿಯೋ ನೋಡಿರಿ ಮತ್ತು ಒಟ್ಟಾಗಿ ಚಟುವಟಿಕೆಯನ್ನು ಮಾಡಿರಿ.

ಎಲ್ಲರೂ ಒಟ್ಟಾಗಿ ವಿಶೇಷವಾದ ಊಟ ಮಾಡಿರಿ

ದಿನ 2

ಆಕ್ಷನ್ ಹಾಡುಗಳು: “ಐ ಆಮ್ ಸ್ಯಾಟಿಸ್ಫೈಡ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ನಿಮ್ಮ ವಿದ್ಯಾರ್ಥಿಗಳೊಂದಿಗೆ ಯಶಸ್ಸನ್ನು ಆಚರಿಸಲು ಒಗಟು ಮತ್ತು ಆಲೋಚನೆಗಳು

ಭಾಗ 2: ವಿಜಯಗಳನ್ನು ಆಚರಿಸುವದು

ನಾವು ತಿಳಿಸಿರುವ 5 ರಲ್ಲಿ ಯಾವುದಾದರು 2 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಆಕ್ಷನ್ ಹಾಡುಗಳು: ವಿಮರ್ಶೆ “ಐ ಆಮ್ ಸ್ಯಾಟಿಸ್ಫೈಡ್”

ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಫಿರಂಗಿ ಚಟುವಟಿಕೆ: “ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಸಣ್ಣ ಫಿರಂಗಿ” ಮಾಡುವ ವೀಡಿಯೋ ನೋಡಿರಿ. ಈಗ ತಂಡವನ್ನು ಅದನ್ನು ಮಾಡಲು ಸಮಯ ಬೇರ್ಪಡಿಸಿಕೊಳ್ಳಿರಿ.

ಚಟುವಟಿಕೆ “ಭೇಟಿಕೊಡುವವರ ಆಲ್ಬಮ್” ಮತ್ತು ಹಿಂಬದಿಯಲ್ಲಿ ಪ್ರೇರಣೆಯುಳ್ಳ ಪೋಸ್ಟರ್

ಹೊರಡುವ ಸಮಯ-ವೀಡಿಯೋ

ಊಟದ ಸಮಯ

ಆಕ್ಷನ್ ಹಾಡುಗಳು: “ಚಾಂಪಿಯನ್ಸ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಆಯ್ಕೆಯ ಆಲೋಚನೆ: ನಿಮ್ಮ ಸಂಡೇ ಸ್ಕೂಲ್ ಅಥವಾ ನಿಮ್ಮ ಮುಂದಿನ ವಿಬಿಎಸ್ ಕುರಿತು ಮಾತನಾಡಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಈ ಭಾಗದಲ್ಲಿ ಎರಡು ಪ್ರಸಂಗಗಳು, 2 ಆಕ್ಷನ್ ಹಾಡುಗಳು, ಇಡೀ ಕೈಪಿಡಿ, 5 ರಲ್ಲಿ 3 ಕಾರ್ಯಗಾರಗಳು, ಮತ್ತು 4 ರಲ್ಲಿ 2 ಚಟುವಟಿಕೆಗಳು.

ಸ್ವಾಗತ ವೀಡಿಯೋ

ಆಕ್ಷನ್ ಹಾಡು: “ಕ್ನಾಕ್ ಔಟ್ ಮೈ ಸಿನ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಚಟುವಟಿಕೆ “ಭೇಟಿಕೊಡುವವರ ಆಲ್ಬಮ್”

ಭಾಗ 1: ಜಯಶಾಲಿ ಚಾಂಪಿಯನ್

ಚಟುವಟಿಕೆ: “ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಸಣ್ಣ ಫಿರಂಗಿ” ಮಾಡುವ ವೀಡಿಯೋ ನೋಡಿರಿ. ಈಗ ತಂಡವಾಗಿ ಅದನ್ನು ಮಾಡಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ನಿಮ್ಮ ಸಣ್ಣ ಫಿರಂಗಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿರಿ: ವಾಟ್ಸಪ್ +52 55 1573 2969 ಇಂಗ್ಲೀಷ್

ನಾವು ತಿಳಿಸಿರುವ 5 ರಲ್ಲಿ 2 ಕಾರ್ಯಗಾರಗಳನ್ನು ಮಾಡುವ ಆಯ್ಕೆಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಊಟದ ಸಮಯದ

ಆಕ್ಷನ್ ಹಾಡು: “ಐ ಆಮ್ ಸ್ಯಾಟಿಸ್ಫೈಡ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಪೇಪರ್ ಬಹುಮಾನ ಚಟುವಟಿಕೆ

“ಪೇಪರ್ ಮೂಲಕ ಬಹುಮಾನ ಮಾಡುವದು ಹೇಗೆ” ವೀಡಿಯೋ ನೋಡಿರಿ, ಮತ್ತು ಒಟ್ಟಾಗಿ ಕೆಲವು ಬಹುಮಾನಗಳನ್ನು ಮಾಡಿರಿ.

ಭಾಗ 2: ಜಯಗಳನ್ನು ಆಚರಿಸುವದು

ನಾವು ತಿಳಿಸಿರುವ 5 ರಲ್ಲಿ 1 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.
ವಿಷಯ ಓದಿರಿ: ಆನ್ ಲೈನ್ ನಲ್ಲಿ ಮಾಡಲು ಕಾರ್ಯಕ್ರಮವನ್ನು ಬದಲಾಯಿಸುವದು ಹೇಗೆ.

ನಿಮ್ಮ ವಿದ್ಯಾರ್ಥಿಗಳೊಂದಿಗೆ ಯಶಸ್ಸನ್ನು ಆಚರಿಸಲು ಒಗಟು ಮತ್ತು ಆಲೋಚನೆಗಳು

ಹೊರಡುವ ಸಮಯ-ವೀಡಿಯೋ

ಈ ವೇಳಾಪಟ್ಟಿಯು 2 ಪ್ರಸಂಗಗಳು, 1 ಹಾಡು, ಕೈಪಿಡಿಯ ಭಾಗ, 5 ಕಾರ್ಯಗಾರಗಳಲ್ಲಿ 1, ಮತ್ತು 4 ಚಟುವಟಿಕೆಗಳಲ್ಲಿ 1 ಚಟುವಟಿಕೆಯನ್ನು ಹೊಂದಿರುತ್ತದೆ.

ಸ್ವಾಗತ ವೀಡಿಯೋ

ಆಕ್ಷನ್ ಹಾಡುಗಳು: “ಕ್ನಾಕ್ ಔಟ್ ಮೈ ಸಿನ್.”

ಭಾಗ 1: ಜಯಶಾಲಿ ಚಾಂಪಿಯನ್

ನಿಮ್ಮ ವಿದ್ಯಾರ್ಥಿಗಳೊಂದಿಗೆ ಯಶಸ್ಸನ್ನು ಆಚರಿಸಲು ಒಗಟು ಮತ್ತು ಆಲೋಚನೆಗಳನ್ನು ತಿಳಿದುಕೊಳ್ಳಿರಿ

ನಾವು ತಿಳಿಸಿರುವ 5 ರಲ್ಲಿ 1 ಕಾರ್ಯಗಾರವನ್ನು ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಚಟುವಟಿಕೆ “ಭೇಟಿಕೊಡುವವರ ಆಲ್ಬಮ್”

ನಮ್ಮೊಂದಿಗೆ ಹಂಚಿಕೊಳ್ಳಿರಿ: ವಾಟ್ಸಪ್ +52 55 1573 2969

ವಿರಾಮ

ಭಾಗ 2: ಜಯಗಳನ್ನು ಆಚರಿಸುವದು

ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಫಿರಂಗಿ ಚಟುವಟಿಕೆ: “ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಸಣ್ಣ ಫಿರಂಗಿಯನ್ನು ಮಾಡುವದು ಹೇಗೆ” ವೀಡಿಯೋ ನೋಡಿರಿ. ಈಗ ತಂಡವಾಗಿ ಅವುಗಳನ್ನು ಮಾಡಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಹೊರಡುವ ಸಮಯ-ವೀಡಿಯೋ

ಭಾಷಿಕರು

Kristina Krauss

United States

Flor Boldo

México

Susana Kangas

United States

Marlon Hernández

Guatemala

Ramón Martínez

México

Jennifer Sánchez

México

ಪುನರಾವರ್ತನೆಗೊಳ್ಳುವ ಪ್ರಶ್ನೆಗಳು

    1. ಕಾರ್ಯಕ್ರಮಕ್ಕಾಗಿ ನೊಂದಾಯಿಸಿಕೊಳ್ಳಿರಿ.
    2. ನಿಮ್ಮ ಸಭೆಯ ಕ್ಯಾಲೆಂಡರ್‌ನಲ್ಲಿ ಜನವರಿ 22ನೇ ತಾರೀಖು ಗುರುತಿಸುವ ಮೂಲಕ ನಿಮ್ಮ ಕಾರ್ಯಕ್ರಮದ ಬಗ್ಗೆ ನಿಮ್ಮ ಸಭೆಯಲ್ಲಿ ಪ್ರಕಟಿಸಿರಿ.
    3. ಮಾಹಿತಿಗಳ ಬಗ್ಗೆ ತಿಳಿಯಲು ಮತ್ತು ಸ್ನೇಹಿತರನ್ನು ಮಾಡಿಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿರಿ.
    4. ಚಟುವಟಿಕೆಗಳಿಗಾಗಿ ಸಂಪನ್ಮೂಲಗಳನ್ನು ಕೂಡಿಸಿಕೊಳ್ಳಿರಿ. (ನಾವೇ ನಿಮಗೆ ಪಟ್ಟಿಯನ್ನು ಕೊಡುತ್ತೇವೆ!)
    5. ವಿಷಯವನ್ನು (ನಿಮ್ಮ ಆಯ್ಕೆಯ ಭಾಷೆಯಲ್ಲಿ ಪಿಡಿಎಫ್ ಮತ್ತು ವೀಡಿಯೋಗಳನ್ನು)
    6. ಅದ್ಭುತವಾದ ಕಾರ್ಯಕ್ರಮವನ್ನು ನಡೆಸಿರಿ! (ಪ್ರಸಂಗವನ್ನು ಸಿದ್ಧಮಾಡುವ ಅವಶ್ಯಕತೆಯಿಲ್ಲ, ಕೈಪಿಡಿಗಳನ್ನು ಮುಂದುವರೆಸಿರಿ ಮತ್ತು ವೀಡಿಯೋಗಳಲ್ಲಿ “ಪ್ಲೇ” ಒತ್ತಿರಿ!)

ಎಲ್ಲಾ ಭಾಷೆಗಳಿಗೂ ನಾವು ಒಂದೇ ಸಲ ನೊಂದಾಯಿಸಿಕೊಳ್ಳಬೇಕು, ಆದರೆ ಕಾರ್ಯಕ್ರಮವು ಎಲ್ಲಾ 17 ಭಾಷೆಗಳಲ್ಲಿ ಬೇರೆ ಬೇರೆ ಆಗಿರುತ್ತದೆ. ನೊಂದಾಯಿಸಲು ನೀವು ಆಂಗ್ಲ ಭಾಷೆಯನ್ನು ಉಪಯೋಗಿಸಿದರೆ ಸಾಕು.

https://bit.ly/3lkAj6j   ಪುಟಕ್ಕೆ ಹೋಗಿರಿ

  1.  ಹಸಿರು ನೊಂದಣಿ ಬಟನ್ ಒತ್ತಿರಿ

 

 

 

  1. ಎಷ್ಟು ಟಿಕೆಟ್ ಬೇಕೋ ಆಯ್ಕೆ ಮಾಡಿರಿ, ಒಂದು ಗುಂಪು ಅಥವಾ ಒಬ್ಬ ಭಾಗವಹಿಸುವವನಿಗೆ ಒಂದು ಟಿಕೆಟ್ ಎಂಬದನ್ನು ನೆನಪುಮಾಡಿಕೊಳ್ಳಿರಿ. ಮತ್ತು ನೊಂದಣಿ ಬಟನ್ ಕ್ಲಿಕ್ ಮಾಡಿರಿ.

 

 

 

 

 

4. ವ್ಯವಸ್ಥೆಯಲ್ಲಿ ಕೇಳಲಾಗುವ ಎಲ್ಲಾ ವಿಷಯಗಳನ್ನು ಭರ್ತಿ ಮಾಡಿರಿ.

ನಿಮ್ಮ ಸ್ವಂತ ಭಾಷೆಯಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆಯಲು ಭಾಷೆ ಮತ್ತು ದೇಶವನ್ನು ಆಯ್ಕೆಮಾಡಬೇಕು ಎಂಬದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.

 

 

 

 

 

  1. ಕಾರ್ಯಕ್ರಮಕ್ಕೆ ಬೇಕಾಗಿರುವ ಟಿಕೆಟ್, ಸಿದ್ಧವಾಗಿದೆ!

ಜನವರಿ 3ನೇ ತಾರೀಖು ಕಾರ್ಯಕ್ರಮದ ಎಲ್ಲಾ ವಿಷಯವನ್ನು ತಿಳಿಯಲು ನಿಮಗೆ ಖಾಸಗಿ ಲಿಂಕ್ ಕಳುಹಿಸಲಾಗುತ್ತದೆ. ಲೋಕವು ಕೊನೆಗೊಳ್ಳುವ ಅಥವಾ ನಮ್ಮ ವೆಬ್ ಸೈಟ್ ಸ್ಥಗಿತಗೊಳ್ಳುವ ತನಕ ಲಿಂಕ್ ನಿಮ್ಮದಾಗಿರುತ್ತದೆ.

ಇಲ್ಲ, ನೀವು ಇನ್ನೊಂದು ದಿನಾಂಕವನ್ನು ಆಯ್ಕೆಮಾಡಬಹುದು ಮತ್ತು ನಿಮ್ಮ ಶಿಕ್ಷಕರಿಗೆ ಬೇರೊಂದು ದಿನಾಂಕದಂದು ಕೊಡುವ ಸಲುವಾಗಿ ವಿಷಯಗಳನ್ನು ಡೌನ್‌ಲೋಡ್ ಮಾಡಬಹುದು.

ನೀವು ವಿಷಯಗಳನ್ನೆಲ್ಲಾ ಡೌನ್‌ಲೋಡ್ ಮಾಡಿದ ನಂತರ, ನೀವು ಬಯಸುವ ಕಾರ್ಯಕ್ರಮಗಳನ್ನೆಲ್ಲಾ ಮಾಡಬಹುದು.

ಅದೇ ದಿನಾಂಕದಂದು ಮಾಡುವದರಲ್ಲಿರುವ ಒಳ್ಳೆಯ ಸಂಗತಿ ಏನೆಂದರೆ ಲೋಕದಾದ್ಯಂತ ಸಹೋದರ ಮತ್ತು ಸಹೋದರಿಯರು ಒಂದೇ ದಿನ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ನೀವು ತಿಳಿದುಕೊಳ್ಳಬಹುದು, ಮತ್ತು ಕಾರ್ಯಕ್ರಮದ ವಾಟ್ಸಪ್ ಗ್ರೂಪ್ ನಲ್ಲಿ ನೀವು ಫೋಟೊಗಳನ್ನು ಹಾಗೂ ಸಾಕ್ಷಿಗಳನ್ನು ಹಂಚಿಕೊಳ್ಳಬಹುದು.

ನಿಮ್ಮೊಂದಿಗೆ ಭಾಗಿಯಾಗಲು ನಿಮ್ಮ ಶಿಕ್ಷಕರನ್ನು ನೊಂದಾಯಿಸಿರಿ ಮತ್ತು ಆಹ್ವಾನಿಸಿರಿ. ನಿಮ್ಮ ಸಭೆಯ ಕ್ಯಾಲೆಂಡರ್‌ನಲ್ಲಿ ಜನವರಿ 22ನೇ ತಾರೀಖನ್ನು ಗುರುತಿಸುವ ಮೂಲಕ ನಿಮ್ಮ ಕಾರ್ಯಕ್ರಮವನ್ನು ಸಭೆಗೆ ಪ್ರಕಟಿಸಿರಿ.

ಸ್ಥಳವನ್ನು ಆಯ್ಕೆಮಾಡಿರಿ: ನಿಮ್ಮ ಶಿಕ್ಷಕರನ್ನು ಒಟ್ಟುಗೂಡಿಸಲು ಮತ್ತು ಇಡೀ ಕಾರ್ಯಕ್ರಮವನ್ನು ನೋಡಲು ಮನೆ, ಸಭೆ ಅಥವಾ ಕೋಣೆ ಆರಿಸಿಕೊಳ್ಳಬಹುದು. ಭದ್ರತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು.

ನೀವು ಸಂಪನ್ಮೂಲಗಳನ್ನೆಲ್ಲಾ ಪ್ರಿಂಟ್ ಮಾಡಬಹುದು ಮತ್ತು ಅವುಗಳನ್ನು ನಿಮ್ಮ ಶಿಕ್ಷಕರಿಗೆ ಕೊಡಬಹುದು, ಅಥವಾ ನೀವು ಪಿಡಿಎಫ್ ಫೈಲ್‌ಗಳನ್ನು ಅವರಿಗೆ ಕಳುಹಿಸಬಹುದು ಮತ್ತು ಅವರು ತಮ್ಮ ಸ್ವಂತ ಕಾರ್ಯಗಾರ ಕಂತೆ ಹಾಗೂ ಕಾರ್ಯಕ್ರಮದ ಕೈಪಿಡಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು.

ಹೌದು! “ಮಕ್ಕಳೇ ಪ್ರಮುಖರು” ಎಂಬದೇ ನಮ್ಮ ಸೇವೆಯಾಗಿದೆ ಆದರೆ ಈಗ ಹೊಸ ಹೆಸರನ್ನು ಹೊಂದಿದ್ದೇವೆ: ಸಿದ್ಧತೆ ಮತ್ತು ಬೆಳವಣಿಗೆ.

ನಮ್ಮ ಹೆಸರು ಮಕ್ಕಳ ಮೇಲೆ ಗಮನ ಕೊಡುವದಾಗಿದೆ, ಈಗ ನಾವು ಮಕ್ಕಳ ಸೇವೆಯ ನಾಯಕರ ಮೇಲೆ ಗಮನಹರಿಸುವವರಾಗಿದ್ದೇವೆ. # ಹೊಸ ಹೆಸರು # ಸಾರಳಿಗೆ # ನಿಮಗೆ

ಹೆಚ್ಚಿನದನ್ನು ನೋಡಿರಿ: www.childrenareimportant.com

ನೊಂದಾಯಿಸಿಕೊಳ್ಳಿರಿ ಮತ್ತು ಉಡುಗೊರೆಯನ್ನು ಪಡೆಯಿರಿ: ಕ್ಯಾಂಪ್ “ಅರಸನು”

ಶಿಬಿರ “ರಾಜ,” ತಂದೆಯ ಮೌಲ್ಯಗಳು. ಅನೇಕ ಮಕ್ಕಳಿಗೆ ತಮ್ಮ ಭೂಲೋಕದ ತಂದೆತಾಯಿಗಳಿಂದ ಎದುರಾಗಿರುವಂಥ ನಕಾರಾತ್ಮಕ ಅನುಭವಗಳು ದೇವರನ್ನು ತಂದೆಯಾಗಿ ತಿಳಿದುಕೊಳ್ಳಲು ಅಡ್ಡಿಯಾಗಿರುತ್ತವೆ. ಈ ಶಿಬಿರದಲ್ಲಿ ಅವರು ಪರಲೋಕದ ತಂದೆಯ ಪ್ರೀತಿಯನ್ನು ಮತ್ತು ವಿಧೇಯತೆಯ ಮೂಲಕ ಆತನಿಗೆ ಪ್ರತಿಕ್ರಿಯಿಸುವದು ಹೇಗೆ ಎಂಬದನ್ನು ಕಲಿತುಕೊಳ್ಳಬಹುದು. ಈಗ ನೀವು ನಿಮ್ಮ ಸಭೆಯಲ್ಲಿ ಸಿನಿಮಾ ಶಿಬಿರ ನಡೆಸಬಹುದು! “ದ ಲಯನ್ ಕಿಂಗ್” ಸಿನಿಮಾ ತೋರಿಸಲು ಬಾಡಿಗೆಗೆ ತೆಗೆದುಕೊಳ್ಳಿರಿ ಮತ್ತು ನಾವು ಪ್ರಸಂಗಗಳು, ಆಟಗಳು, ಕೌಶಲಗಳು ಮತ್ತು ಅನೇಕ ಆಶೀರ್ವಾದಗಳನ್ನು ಒದಗಿಸುತ್ತೇವೆ. ಈಗ ನಿಮಗೆ ಅವಶ್ಯವಿರುವದು ಪಾಪ್‌ಕಾರ್ನ್ ಮಾತ್ರವೇ ಆಗಿದೆ!

ಲಭ್ಯವಿರುವ ಭಾಷೆಗಳು

ನಾವು ನಿಮಗಾಗಿ ಇಟ್ಟಿರುವ ಸಾಮಗ್ರಿಗಳನ್ನು ತಿಳಿದುಕೊಳ್ಳಲು ಭಾಷೆಯ ಮೇಲೆ ಕ್ಲಿಕ್ ಮಾಡಿರಿ:

ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿರಿ

+52 55 1573 2969 ಇಂಗ್ಲೀಷ್

ಸೈನ್ ಅಪ್

$ 50 ಯುಎಸ್‌ಡಿ

ಈಗ

ಉಚಿತ

+52 55 1573 2969

Children are Important

www.childrenareimportant.com/kannada